First slide

Courtesy :

ಪೃಥ್ವಿ ಫೌಂಡೇಷನ್ ವತಿಯಿಂದ ಅಂತರರಾಷ್ಟ್ರೀಯ ವಿಶೇಷ ಚೇತನರ ಹಾಗೂ ಲೂಯಿ ಬ್ರೈಲ್ ದಿನಾಚರಣೆ 2026 ಆಚರಿಣೆ.

ಪೃಥ್ವಿ ಫೌಂಡೇಷನ್ (ರಿ) ಚಂದಾಪುರ ವತಿಯಿಂದ ಅಂತರರಾಷ್ಟ್ರೀಯ ವಿಶೇಷ ಚೇತನರ ಹಾಗೂ ಲೂಯಿ ಬ್ರೈಲ್ ದಿನಾಚರಣೆ 2026 ಆಚರಿಸಲಾಯಿತು.. ವಿಶೇಷ ಚೇತನರ ಸೇವಾ ಸಂಸ್ಥೆ ಆದಂತಹ ಪೃಥ್ವಿ ಫೌಂಡೇಶನ್ ಚಂದಾಪುರ ವತಿಯಿಂದ ದಿನಾಂಕ ನಾಲಕ್ಕು ಒಂದು 2026 ನೇ ಭಾನುವಾರದಂದು ಅಂತರಾಷ್ಟ್ರೀಯ ವಿಶೇಷ ಚೇತನರ ಹಾಗೂ ಲೂಯಿ ಬ್ರೈಲ್ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮನು ರೋಟರಿ ಸ್ಪಂದನ ಬೆಂಗಳೂರು ನ ಅಧ್ಯಕ್ಷರಾದಂತಹ ಶ್ರೀ ಸರವಣನ್ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೈನ್ಸ್ ಕ್ಲಬ್ ಆಫ್ ಚಂದಾಪುರದ ಅಧ್ಯಕ್ಷರಾದಂತಹ ಶ್ರೀ ಸಂತೋಷ್ ಕುಮಾರ್ ಅವರು ವಹಿಸಿದ್ದರು.. ಹಾಗೆ ಕಾರ್ಯಕ್ರಮಕ್ಕೆ ಸ್ಥಳೀಯ ಮುಖಂಡರುಗಳು ಸಮಾಜಸೇವಕರು ಲೈನ್ಸ್ ಕ್ಲಬ್ ಹಾಗೂ ರೋಟರಿ ಸಂಸ್ಥೆಯ ಮುಖ್ಯಸ್ಥರುಗಳು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ರೋಟರಿ ಸ್ಪಂದನ ವತಿಯಿಂದ ಪೃಥ್ವಿ ಫೌಂಡೇಶನ್ ಸಂಸ್ಥೆಗೆ ಅಗತ್ಯ ವಸ್ತುಗಳಾದಂತಹ ಕುಕ್ಕರ್ ಮಿಕ್ಸಿ ಮುಂತಾದ ವಸ್ತುಗಳನ್ನು ನೀಡಲಾಯಿತು ಹಾಗೆ ವಿಶೇಷ ಚೇತನ ಮಕ್ಕಳಿಗೆ ಹಾಸಿಗೆ ದಿಂಬುಗಳನ್ನು ಸಹ ವಿತರಣೆ ಮಾಡಲಾಯಿತು. ಸಂಸ್ಥೆಯ ಸಂಸ್ಥಾಪಕರಾದಂತಹ ಭಾನುಮತಿ ರವರು ಹಲವಾರು ವರ್ಷಗಳಿಂದ ಈ ವಿಶೇಷ ಚೇತನ ಮಕ್ಕಳಿಗೆ ಆಸರೆಯಾಗಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಇದೇ ಸಂದರ್ಭದಲ್ಲಿ ಮಾತನಾಡಿದಂತಹ ವಿಶೇಷ ಚೇತನ ಮಕ್ಕಳುಗಳು ಭಾನುಮತಿಯವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು ಹಾಗೆಯೇ ಈ ವಿಶೇಷ ಚೇತನ ಮಕ್ಕಳುಗಳು ನಡೆಸಿ ಕೊಟ್ಟಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿಥಿಗಳ ಕಣ್ಮನ ತುಂಬಿ ಬಂದವು. ಆಗಮಿಸಿದ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಸಹ ಹಮ್ಮಿಕೊಳ್ಳಲಾಗಿತ್ತು ಇದೇ ಸಂದರ್ಭದಲ್ಲಿ ಮಾತನಾಡಿದ ಗಣ್ಯರುಗಳು ಭಾನುಮತಿಯವರ ಈ ಕೆಲಸವನ್ನು ಶ್ಲಾಧಿಸುವುದರ ಜೊತೆಗೆ ಅವರ ಈ ಸಮಾಜಮುಖಿ ಕೆಲಸಕ್ಕೆ ತಾವು ಸದಾ ಬೆನ್ನೆಲುಬುವಾಗಿ ನಿಲ್ಲುವುದಾಗಿ ತಿಳಿಸಿದರು.

06-01-2026