Courtesy :
ಈಗ ಪ್ರತೀ ಮಾಧ್ಯಮಗಳೂ ಕೂಡ ಲಕ್ಕುಂಡಿಯ ಮೇಲೆ ಕಣ್ಣಿಟ್ಟಿವೆ, ನೆಲಕ್ಕೆ ಬೀಳುವ ಒಂದೊಂದು ಹೊಡೆತವೂ ಗ್ರಾಮದಿಂದ ದಿಲ್ಲಿ ತನಕ ಎದೆ ಬಡಿತ ಹೆಚ್ಚಿಸುತ್ತಿದೆ. ಅದರ ಜೊತೆ ಈಗ ಮತ್ತೊಂದು ವಿಷಯ ಜನರ ಹುಬ್ಬೇರಿಸುವಂತೆ ಮಾಡಿದೆ. ನೀವೇನಾದ್ರೂ ಲಕ್ಕುಂಡಿ ಮೂಲದವರಾಗಿದ್ರೆ ನಿಮ್ಗೆ ಅದೃಷ್ಟ ಕಾದಿದೆ ಅಂತಲೇ ಅರ್ಥ ಆದರೆ ನೀವು ಸರ್ಕಾರದ ನಡೆಯನ್ನು ಕಾದು ನೋಡಬೇಕಷ್ಟೇ! ಅಂಥದ್ದೇನು ಆಗಿದೆ ಅಂತೀರಾ? ಪ್ರವಾಸೋದ್ಯಮ, ನಿಧಿ ಸಿಕ್ಕ ಹಿನ್ನಲೆ, ಗದಗ-ಕೊಪ್ಪಳ ರಸ್ತೆಯಲ್ಲಿಯೇ ಲಕ್ಕುಂಡಿ ಬರುವುದೂ ಕೂಡ ಈಗ ಲಕ್ಕುಂಡಿಯ ರಿಯಲ್ ಎಸ್ಟೇಟ್ ಬೂಮ್ ಆಗಲು ಕಾರಣವಾಗಿದೆ. 2023 ರಲ್ಲಿ ರಸ್ತೆ ಪಕ್ಕದ ಒಂದು ಎಕರೆ ಭೂಮಿಯ ಬೆಲೆ 50 ಲಕ್ಷ ಇತ್ತು ಆದರೆ ಈಗ ಅದು 1 ಕೋಟಿ ಇಂದ 1.50 ಕೋಟಿ ತಲುಪಿದೆ. ಅದರಲ್ಲೂ ಕೂಡ ನಿಧಿ ಸಿಕ್ಕ ಆಸುಪಾಸಲ್ಲಿ ಜನ ಇದಕ್ಕಿಂತ ಹಣ ಕೊಟ್ಟು ಭೂಮಿ ಖರೀದಿಸಲು ಮುಂದಾಗಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಕೂಡ ಕಾದಿದೆ. ಇದೀಗಷ್ಟೇ ಉತ್ಖನನ ಆರಂಭವಾಗಿದ್ದು ಇನ್ನೂ ಕೂಡ ಸಂಪೂರ್ಣವಾಗಿ ಸಂಶೋಧನಾ ಕಾರ್ಯ ಸೇರಿದಂತೆ ಅನೇಕ ಕಾರ್ಯಗಳು ಬಾಕಿ ಇವೆ. ಇವೆಲ್ಲದರ ನಂತರ ಲಕ್ಕುಂಡಿಯಲ್ಲಿ ಏನೇನು ಸಿಗುತ್ತದೋ ಅದು ಸರ್ಕಾರಕ್ಕೆ ಪ್ರಭಾವಶಾಲಿಯಾಗಿ ಐತಿಹಾಸಿಕ ಮೌಲ್ಯಗಳು ತುಂಬ ಪ್ರಬಲವಾಗಿ ಸಿಕ್ಕರೆ ಇಡೀ ಊರಿಗೆ ಊರೇ ಸ್ಥಳಾಂತರವಾಗಲಿದೆಯಂತೆ! ಈ ಕುರಿತು ಚರ್ಚೆಗಳು ಇನ್ನೂ ಗುಸುಗುಸು ಹಂತದಲ್ಲಿದ್ದು ಈ ನಿಧಿ ಊರವವರಿಗೆ ಬಿಸಿ ತುಪ್ಪವಾಗಿರೋದಂತೂ ಸತ್ಯ!
22-01-2026