First slide

Courtesy :

ಎ.ಪಿ.ಎಸ್‌ ಪಿಯು ಕಾಲೇಜ್‌ ನಲ್ಲಿ ಭಾರತದರ್ಶನ ಕಾರ್ಯಕ್ರಮ

            ಬೆಂಗಳೂರು: ಎ.ಪಿ.ಎಸ್  ಪಿಯು ಕಾಲೇಜ್‌  ಆಫ್ ಆರ್ಟ್ಸ್‌  ಸೈನ್ಸ್ ಅಂಡ್‌ ಕಾಮರ್ಸ್‌ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಲು ಮತ್ತು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಅರಿಯಲು ಭಾರತದರ್ಶನ ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ 125 ವಿದ್ಯಾರ್ಥಿಗಳು ಭಾರತದ ಪ್ರತಿ ರಾಜ್ಯದ ವೈಶಿಷ್ಟ್ಯ ಪೂರ್ಣ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಆರ್.ಜಿ. ಪ್ರದೀಪ ಭಾಗವಹಿಸಿದ್ದರು. ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ  ಅನಂತಜ್ಞಾನ ಗಂಗೋತ್ರಿ ಕ್ರೀಡಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಶಕ್ತಿ ವೃದ್ಧಿಗೆ ಎ.ಪಿ.ಎಸ್‌ ಜ್ಞಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ವಿವಿಧ ಕ್ರೀಡಾ ಮತ್ತು ಫಿಟ್ನೆಸ್‌ ಕ್ಲಬ್ಗಳನ್ನು ಉದ್ಘಾಟಿಸಲಾಯಿತು. ಈಕಾರ್ಯಕ್ರಮದಲ್ಲಿ ಮಾಜಿ ವಿದ್ಯಾರ್ಥಿನಿ, ಯೋಗಪಟು ಅಂಕಿತಾ ಎಂ. ಗೋಪಾಲ್ ಪಾಲ್ಗೊಂಡಿದ್ದರು. ಎಪಿಎಸ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅನಂತಾಚಾರ್‌ ಅವರಿಗೆ ಗೌರವ ಸಲ್ಲಿಸಲಾಯಿತು. ಎಪಿಎಸ್ ಪಬ್ಲಿಕ್ ಸ್ಕೂಲ್ ಗೆ ಬೆಂಗಳೂರಿನ ಶ್ರೇಷ್ಠ ಶಾಲೆ [ಮೋಸ್ಟ್ ಡೈನಾಮಿಕ್ ಸ್ಕೂಲ್ ಆಫ್ ಬೆಂಗಳೂರು] ಎಂಬ ಪ್ರಶಸ್ತಿ ಸಂದಿದೆ. ತಾಜ್‌ ವೆಸ್ಟ್‌ ಎಂಡ್‌ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲ್ಲಂಪಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಎಜುಕೇಶನ್ ಟುಡೆ ರಾಷ್ಟ್ರಮಟ್ಟದ ಪತ್ರಿಕೆ ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಪರ್ಧೆ ನಡೆಸಿ ನಮ್ಮ ಶಿಕ್ಷಣ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಡಾ. ವಿಷ್ಣು ಭರತ್‌ ಅಲಂಪಲ್ಲಿ ತಿಳಿಸಿದರು

08-12-2025