First slide

Courtesy :

ಬೆಂಗಳೂರು ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ

ಬೆಂಗಳೂರು ನಗರದ ಹಾನಗಲ್ ಕುಮಾರ ಸ್ವಾಮಿ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.

ಈ ಸಮಾರಂಭವನ್ನು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಉದ್ಘಾಟಿಸಿದರು ಸಮಾರಂ ಭದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಾಶಾಂತ ವೀರಯ್ಯನವರು ವಹಿಸಿದ್ದರು. ಬೆಂಗಳೂರು ಜಿಲ್ಲಾಧ್ಯಕ್ಷರಾದ ಎಸ್ ಗುರುಸ್ವಾಮಿ ಅವರು ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಮುಕ್ತಾಂಬ ಬಸವರಾಜ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಹಾಗೆಯೇ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮೃತ್ಯುಂಜಯ ಸ್ವಾಮಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾದ   ಶ್ರೀಮತಿ ಸುಮಿತ್ರ ರೇಣುಕಾಚಾರ್ಯ ವಿಧಾನಸಭಾ ಘಟಕದ ಅಧ್ಯಕ್ಷರಾದ ಶ್ರೀಮತಿ  ಹೇಮಲತಾ ಮುತ್ತು ಬೆಂಗಳೂರು ಯುವ ಘಟಕದ ಅಧ್ಯಕ್ಷರಾದ ಸಂದೀಪ್ ಪಾಟೀಲ್ ರವರು ಅತಿಥಿಗಳಾಗಿ ಆಗಮಿಸಿದ್ದರು

ಸಮಾರಂಭದ ಉಸ್ತುವಾರಿಯನ್ನು ಪುಷ್ಪಲತಾ ಎಸ್ ಹಾಗೂ ಸಹ ಉಸ್ತುವಾರಿಯನ್ನು ನೇತ್ರಾವತಿ ಬಿ ಎಸ್ ವಹಿಸಿದ್ದರು 

ಹಾಗೆಯೇ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸುಮಂಗಳ ಕೇದಾರ ಸ್ವಾಮಿ, ಉಷಾ ವೀರಭದ್ರಯ್ಯ,, ವಿಜಯ ಜಗನ್ನಾಥ್, ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ಅರುಣ್ ಕುಮಾರ್, ಕಾರ್ಯದರ್ಶಿಗಳಾದ ಆರತಿ ಮಹದೇವ, ಡಾಕ್ಟರ್ ವಿಮುಕ್ತ ಅವಿನಾಶ್, ಶಾಂತಿ ಡಿ ಆವರಿಡಿ, ಶಶಿಕಲಾ ದೇವಿ, ಮತ್ತು ಖಜಾಂಚಿಗಳಾದ ಲತಾ ಪದ್ಮರಾಜ್ ಭಾಗವಹಿಸಿದ್ದರು.

ಹಚ್ಚೇವು ಕನ್ನಡದ ದೀಪ ಹಾಡಿನ ಮೂಲಕ ಎಲ್ಲಾ ಮಹಿಳಾ ಸದಸ್ಯರುಗಳು ಅದ್ದೂರಿಯಾಗಿ ಕಾರ್ಯಕ್ರಮವನ್ನು ಆರಂಭಿಸಲಾಯಿತು ಹಾಗೆಯೇ ರಾಜ್ಯ ಮಹಿಳಾ ಘಟಕದ ಸರ್ವ ಸದಸ್ಯರುಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾಜ್ಯೋತ್ಸವಕ್ಕೆ ಮೆರಗುತಂದರು ಕೆಂಪು ಹಳದಿಯ ವಸ್ತ್ರಗಳೊಂದಿಗೆ ರಾಜ್ಯ ಘಟಕದ ಮಹಿಳಾ ಸದಸ್ಯರುಗಳು ರಾಜ್ಯೋತ್ಸವದ ಮೆರಗಲ್ಲು ಹೆಚ್ಚಿಸಿದರು

01-12-2025