Courtesy :
ಬೆಂಗಳೂರು,ಏಪ್ರಿಲ್ 14, ಲಿಡ್ಕರ್ ಭವನದ ಸಭಾಂಗಣದಲ್ಲಿ -ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಜಯಂತೋತ್ಸವ ಜರುಗಿತು. ಇದೇ ಸಂದರ್ಭದಲ್ಲಿ "ಬಹುಜನರ ಐಕ್ಯತಾ ಸಮಾವೇಶ" ನಡೆಯಿತು. RPI(B) ಹಾಗೂ ದಸಂಸ ಜಂಟಿಯಾಗಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ದಸಂಸ ಹಾಗೂ RPI(B) ಪದಾಧಿಕಾರಿಗಳು ಆಗಮಿಸಿ ಪಾಲ್ಗೊಂಡಿದ್ದರು. ಇವರೊಂದಿಗೆ ರಾಜ್ಯಾಂದ್ಯಂತ ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮುಖಂಡರು ಆಗಮಿಸಿ ಪಾಲ್ಗೊಂಡಿದ್ದರು. ಈ ಇದೇ ಸಂದರ್ಭದಲ್ಲಿ ಸಮಾರಂಭವನ್ನುದ್ದೇಶಿಸಿ ಹಲವಾರು ಹಿರಿಯ ಮುಖಂಡರು ಮಾತನಾಡಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ)ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ|| ಎನ್ ಮೂರ್ತಿ ಸಮಾವೇಶವನ್ನು ದೀಪ ಹಚ್ಚುವ ಮೂಲಕ ನೀಲಿ ಬಾವುಟ ಬೀಸಿ ಉದ್ಘಾಟಿಸಿದರು.
ಡಾ|| ಬಿ.ಆರ್.ಅಂಬೇಡ್ಕರವರು ಹಾಗೂ ಜಗಜೀವನರಾಮ್ ರವರು ಕೇವಲ ಒಂದು ವರ್ಗದ ಏಳೆಗೆಗಾಗಿ ಶ್ರಮಿಸಿದ ನಾಯಕರಲ್ಲ. ಸರ್ವಜನಾಂಗದ ಕಲ್ಯಾಣಕ್ಕಾಗಿ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿದ ಮಹಾ ನಾಯಕರು.
ಬಾಬು ಜಗಜೀವನರಾಮ್ ರವರು 5 ದಶಕಗಳ ದೀರ್ಘಕಾಲ ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಜಕೀಯ ಮುತ್ಸದ್ದಿಗಳಾಗಿದ್ದರು. ಕೃಷಿ ಆಧುನಿಕರಣಗೊಳಿಸಿ ಅಂದಿನ ಬರಗಾಲದ ಬಿಕ್ಕಟ್ಟನ್ನು ನಿವಾರಣೆಗೊಳಿಸಿದ ಹಸಿರು ಕ್ರಾಂತಿಯ ಹರಿಕಾರರು ಹಾಗೂ ಅಸ್ಪೃಶ್ಯರ ವಿಮೋಚನೆಗೆ ರಾಜಕೀಯ ಹೋರಾಟ ಮಾಡಿದವರು ಎಂದು ಡಾ. ಏನ್ ಮೂರ್ತಿ ಬಣ್ಣಿಸಿದರು.
ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ರವರು ವಿಶ್ವಜ್ಞಾನಿ, ಮಹಾ
ಮಾನವತಾವಾದಿ ಮತ್ತು ಸಂವಿಧಾನದ ನಿರ್ಮಾಪಕರು ಹಾಗೂ ಅಸ್ಪೃಶ್ಯರ ವಿಮೋಚನಾ ಹರಿಕಾರರು, ನನ್ನ ಜನ ಆಳುವ ದೊರೆಗಳಾಗಬೇಕು. ನಮ್ಮ ದೇಶ ಸದೃಡ ಭಾರತವಾಗ ಬೇಕು ಎಂದು ಮಹಾದಾಸೆಪಟ್ಟವರು. ಬಾಬಾ ಸಾಹೇಬರನ್ನು ಯಾರಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಅವರಿಗೆ ಅವರೆ ಸಾಟಿ .
ನೆಲದ ಎಲ್ಲಾ ಜೀವರಾಶಿಗಳ ಜೀವಪರತತ್ವ ಸಿದ್ಧಾಂತದ ವಿದ್ಯಾಶಿಖರವನ್ನೇರಿದ ಭಾರತರತ್ನ ಬಾಬಾ ಸಾಹೇಬರು ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನರಾಮ್ ಇಬ್ಬರು ದೇಶದ ಎರಡು ಕಣ್ಣುಗಳೆಂದು ದಾದಾ ಸಾಹೇಬ್ ಡಾ|| ಎನ್ ಮೂರ್ತಿ ಬಣ್ಣಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ ಇನ್ನು ಸಹ ಬಡತನ, ನಿರುದ್ಯೋಗ, ಹಸಿವು, ಅಸ್ಪೃಶ್ಯತೆ, ಭ್ರಷ್ಟಾಚಾರ. ಸ್ವಜನ ಪಕ್ಷಪಾತ, ಕೋಮು, ಜಾತಿ, ಘರ್ಷಣೆ, ಗಣನೀಯವಾಗಿ ಹೆಚ್ಚಿದೆ. ಕಳ್ಳ ವ್ಯಾಪಾರ, ಕಳ್ಳದಂದೆಗೆ ಕಡಿವಾಣ ಬಿದ್ದಿಲ್ಲ. ಅಲ್ಲದೆ ದೇಶದಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಕ್ರಾಂತಿ ನಡೆದಿಲ್ಲ. ಮೌಡ್ಯ, ಕಂದಾಚಾರ ಮಡುಕಟ್ಟಿದೆ. ಅಸ್ಪೃಶ್ಯತೆ ನಿಷೇಧಿಸಿದರು ಸಹ ಪರಿಶಿಷ್ಟರ ಮೇಲಿನ ದೌರ್ಜನ್ಯ, ಕೋಲೆ, ಅತ್ಯಾಚಾರ, ಸಾಮಾಜಿಕ ಬಹಿಷ್ಠಾರ ಅವ್ಯಾತವಾಗಿ ಜರುಗಿದೆ ಎಂದರು.
ದೇಶದ ಜನಸಂಖ್ಯೆಯಲ್ಲಿ ಶೇ.85ರಷ್ಟಿರುವ ದಲಿತರು, ಹಿಂದುಳಿದವರು, ಧಾರ್ಮಿಕ ಅಲ್ಪ ಸಂಖ್ಯಾತರಲ್ಲಿ ಐಕ್ಯತೆ ಮೂಡಿಲ್ಲ. ಒಗ್ಗಟ್ಟಾಗುವುದನ್ನು ಕಲಿಯಲಿಲ್ಲ, ಆಜನ್ಮ ವೈರಿಗಳಂತೆ ತಮ್ಮತಮ್ಮಲ್ಲೇ ಕಾದಾಡುತ್ತಿದ್ದಾರೆ. ಒಬ್ಬರನ್ನೊಬ್ಬರು ಪ್ರೀತಿಸದೆ ದ್ವೇಷಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಜಾತಿ ಜಾತಿಗಳನ್ನು ಎತ್ತಿ ಕಟ್ಟಿ ರಾಜಕೀಯ ಬೆಳೆ ಬೆಯಿಸಿಕೊಳ್ಳುತ್ತಿವೆ. ಶೋಷಣೆಗೆ ಒಳಗಾದ ಎಚ್ಚೆತ್ತುಕೊಳ್ಳಬೇಕೆಂದು ಡಾ|| ಎನ್ ಮೂರ್ತಿ ಕರೆ ನೀಡಿದರು.
**ಬಹುಜನ ಐಕ್ಯತಾ ಅಭಿಯಾನ ಮತ್ತು ಸಭೆಯ ನಿರ್ಣಯಗಳು*
1. 101 ಪರಿಶಿಷ್ಟ ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯ, ಗೊಂದಲ ಮೂಡಿದೆ . ಹಾಗಾಗಿ ರಾಜಕೀಯ ಅವಕಾಶವಾದಿಗಳ ಬಗ್ಗೆ ಎಚ್ಚರಿಕೆ ವಹಿಸುವ ತುರ್ತು ಅಗತ್ಯವಿದೆ. ಒಳಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ಬೀದಿ ಜಗದ ಕಿಚ್ಚು ಹೊತ್ತಿಸಿದವರು. ಸಂವಿಧಾನ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಚಿಂತನೆಯ ವಿರೋಧಿಗಳು, ಹಾಗೂ "ಸಾಮಾಜಿಕ ನ್ಯಾಯದ ಕಡು ವೈರಿಗಳು, "ಹೋಲೆ-ಮಾದಿಗರು ಅಸ್ಪೃಶ್ಯತೆಯ ಕಹಿ ಅನುಭವದಲ್ಲಿ ಸಮಾನ ದುಃಖಿಗಳು" ಅವರ ವಿಮೋಚನೆಯಲ್ಲಿಯೇ ದೇಶದ ವಿಮೋಚನೆ ಇದೆ ಪರಿಶಿಷ್ಟ : 101 ಜಾತಿಗಳು ಸಹೋದರತ್ವದಿಂದ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಎಚ್ಚರಿಕೆಯ ಹೆಜ್ಜೆ ಇಡಬೇಕು. ದ.ಸಂ.ಸ ಹಾಗೂ (RPI(B)) 101 ಪರಿಶಿಷ್ಟ ಜಾತಿಗಳು ಹಾಗೂ ಎಲ್ಲ ಶೋಷಿತರ ಹಿತ ಮತ್ತು ವಿಮೋಚನೆಗೆ ಜವಾಬ್ದಾರಿಯುತ "ಜಾಗೃತಿ ಚಳವಳಿ" ನಡೆಸುತ್ತಿದೆ. "ಬಹುಜನ ಐಕ್ಯತಾ ಅಭಿಯಾನವು :-14-04-2026 ರಿಂದ :-14-04-20270 ವರೆಗೆ ರಾಜ್ಯಾದ್ಯಂತ ಸಮಾಸವೇಶ, ವಿಚಾರ ಸಂಕೀರ್ಣ, ಬೀದಿ ನಾಟಕ ಇತ್ಯಾದಿಗಳನ್ನು ನಡೆಸಲು ಇಂದು ಈ ಕಾರ್ಯಕ್ರಮ ಉದ್ಘಾಟನೆಗೊಂಡು ಸಭೆ ನಿರ್ಣಯಿಸಿತು.
2. ದೇಶದಲ್ಲಿನ ರಾಜಕೀಯ ಅಧಿಕಾರ ತನ್ನ ಕೈಗೆ ತೆಗೆದುಕೊಳ್ಳಲು ಬಲಹೀನ ವರ್ಗಗಳೆಲ್ಲ 'ಒಂದೇ ರಾಜಕೀಯ ಸಿದ್ಧಾಂತದ ವೇದಿಕೆಯಲ್ಲಿ ಐಕ್ಯತೆಯಿಂದ ಒಗ್ಗಟ್ಟಾಗಬೇಕಾದ ತುರ್ತು ಅನಿವಾರ್ಯತೆ ಇದೆ. ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ ಹಾಗೂ ಶೋಷಣೆಗಳಿಗೆ ಪರಿಹಾರ ಕಂಡು ಕೊಳ್ಳಲು ರಾಜಕೀಯ ಅಧಿಕಾರ ತೀರ ಅಗತ್ಯವಾಗಿದೆ. ಅಧಿಕಾರ ಹೀನತೆಯೇ ಅಸ್ಪೃಶ್ಯತೆಗೆ ಕಾರಣವಾಗಿದೆ. ಯಾರ ಕೈಲಿ ಅಧಿಕಾರ ಶಕ್ತಿ ಇರುತ್ತದೆಯೋ ಅವರಿಗೆ ಸ್ವಾತಂತ್ರ್ಯವಿರುತ್ತದೆ. ಸರ್ವ ಸಮಸ್ಯೆಗಳ ಮುಕ್ತಿಗೆ ಅಧಿಕಾರ ಒಂದೇ ಮಾರ್ಗವೆಂಬುದನ್ನು ಅರಿಯಬೇಕು. ಆ ಮೂಲಕ ಎಲ್ಲ ಶೋಷಿತರು ಸ್ವಾರ್ಥ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕ್ಯತೆಯ ರಾಜಕೀಯ ಹೋರಾಟ ನಡೆಸಬೇಕು ಡಾ||ಬಿ.ಆರ್.ಅಂಬೇಡ್ಕರ್ರವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಹುಜನರು ಹಾಗೂ ಎಲ್ಲಾ ಶೋಷಿತರು ಒಗ್ಗಟ್ಟಾಗಿ ಗುರಿ ಸಾಧನೆಗೆ ಮುಂದಾಗಬೇಕು ಎಂದು ನಿರ್ಣಯಿಸಿತು.
3. ಈ ನಿಟ್ಟಿನಲ್ಲಿ ಬಹುಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ನಿರಂತರ ಜಾಗೃತಿ ಮೂಡಿಸಲು ಸಭೆ ಒಕ್ಕೋರಿಲಿನ ನಿರ್ಣಯ ಅಂಗೀಕರಿಸಿತು.
- ಪರಿಶಿಷ್ಟರಲ್ಲಿ ಒಗ್ಗಟ್ಟು ಹಾಗೂ ಸಾಮರಸ್ಯ ಮರುಸ್ಥಾಪಿಸಲು ಯೋಜನೆ ರೂಪಿಸುವುದು ಹಾಗೂ ಒಳ ಮಿಸಲಾತಿ ವರ್ಗಿಕರಿಸಿ ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನಿಸಲು ನಿರ್ಣಯ ಅಂಗೀಕರಿಸಿತು.
5. ಒಳಮಿಸಲಾತಿ ವರ್ಗಿಕರಣಕ್ಕೆ ಹಾಗೂ ಒಳಮಿಸಲಾತಿ ವಿರೋಧಿ ಕಾಂಗ್ರೇಸ್, ವಿರುದ್ಧ ಹಾಗೂ ವರ್ಗಿಕರಣಕ್ಕೆ ನಿರಂತರ ಉಗ್ರ ಹೋರಾಟ ರೂಪಿಸಲು ನಿರ್ಣಿಯಿಸಿತು.
6. ಒಂದು ವರ್ಷ "ಬುದ್ಧ ಧಮ್ಮಾ ಹಾಗೂ ಸಂವಿಧಾನ ಜನ ಜಾಗೃತಿ" ಆಂದೋಲನ ರಾಜ್ಯಾಂದ್ಯಂತ ನಡೆಸಲು ನಿರ್ಣಯಿಸಿತು
ಜಿ ಸುಬ್ರಮಣಿ ಜಿಲ್ಲಾಧ್ಯಕ್ಷರು ಬೆಂಗಳೂರು, ಬಸವರಾಜ್ ಸಾಸಲಮರಿ, ವಿಭಾಗೀಯ ಅಧ್ಯಕ್ಷರು ರಾಯಚೂರು ವಿಭಾಗ, ಪಿ ರಾಮಯ್ಯ ಜಿಲ್ಲಾಧ್ಯಕ್ಷರು ತುಮಕೂರು, ಶಂಕರ್ ಜಿಲ್ಲಾಧ್ಯಕ್ಷರು, ಮೈಸೂರು ಶ್ರೀನಿವಾಸ ಭಂಡಾರಿ ಜಿಲ್ಲಾಧ್ಯಕ್ಷರು ಬಳ್ಳಾರಿ. ವಿಶ್ವನಾಥ ಜಿಲ್ಲಾಧ್ಯಕ್ಷರು ಚಿತ್ರದುರ್ಗ, ಅಶೋಕ್ ನಂಜಲದಿನ್ನಿ ಜಿಲ್ಲಾಧ್ಯಕ್ಷರು ರಾಯಚೂರು, ರಮೇಶ್ ಜಿಲ್ಲಾಧ್ಯಕ್ಷರು ಹಾಸನ. ಅಶೋಕ್ ಕರೆಕಲ್ ಜಿಲ್ಲಾಧ್ಯಕ್ಷರು ಬಿಜಾಪುರ, ಮಂಜುನಾಥ್ ಜಿಲ್ಲಾಧ್ಯಕ್ಷರು ದಾವಣಗೆರೆ, ಹರಿಹರಗೋಖಲೆ ಜಿಲ್ಲಾಧ್ಯಕ್ಷರು ಬೀದರ್, ನಾಗರಾಜು ಜಿಲ್ಲಾಧ್ಯಕ್ಷರು ಗುಲ್ಬರ್ಗಾ ಹೆಚ್ ಟಿ ಮೂಡ್ಲಪ್ಪ ಜಿಲ್ಲಾಧ್ಯಕ್ಷರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದ.ಸಂ.ಸ.ರಾಜ್ಯ ಸಮಿತಿಯ ನಿರ್ದೇಶಕರಾದ ಬೈಲಕ ಬೈಲಹೋನ್ನಯ್ಯ, ಕೋದಂಡರಾಮ್, ಪರಮೇಶ್ವರ ಹಿರಿಯ ಮುಖಂಡ ಮುರುಗೇಶ್, 88 ರಮೇಶ್, ಮುಂತಾದ
ಮುಖಂಡರು ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದರು.