Courtesy :
ಕರುನಾಡ ಉದಯ ಸುದ್ದಿ. ಬೆಂಗಳೂರು ಏಪ್ರಿಲ್ 20; ವಿದ್ಯಾರ್ಥಿಗಳು ಕಾಲಾವಕಾಶ ಸಿಕ್ಕಾಗ ಇರುವ ಅವಕಾಶಗಳನ್ನು ಬಳಸಿಕೊಂಡು ಮುಂದವರೆದರೆ ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬಹುದು ಎಂದು ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ಪಕೀರ ದಿಂಗಾಲೇಶ್ವರ ಮಹಾಸ್ವಾಮಿ ತಿಳಿಸಿದರು.ವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆವತಿಯಿಂದ ನಡೆದ ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ಡಾ.ಎಲ್.ಸಿದ್ಧಲಿಂಗಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳು ಮಾಡಬಾರದ ಸಂದರ್ಭದಲ್ಲಿ ನಾವು ಸಾಧಿಸದಿದ್ದರೆ ಮುಂದೊದು ದಿನ ನೋವು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ವಿದ್ಯೆ ಸಂಪತ್ತುಗಳು ಇವುಗಳನ್ನು ಕಾಪಾಡಿಕೊಂಡು ಹೋಗಬೇಬ್ಬಿ ತೋಟದಪ್ಪ ಛತ್ರದಲ್ಲಿ ಡಾ.ಎಲ್,ರೇವಣ್ಣ ಸಿದ್ಧಯ್ಯ ಅವರ ನೇತೃತ್ವದಲ್ಲಿ ನಡೆದುಕೊಂಡು ಹೋಗುತ್ತಿದೆ,ಎಲ್.ರೇವಣ್ಣ ಸಿದ್ಧಯ್ಯ ಅವರು ಸಿದ್ಧಗಂಗ ಶ್ರೀ ಅತ್ಯುತ್ತಮ ಭಕ್ತರಲ್ಲದೇ ಶಿಷ್ಯರು ಆಗಿದ್ದರು,ಸಿದ್ಧಗಂಗಾ ಮಠದ ಎಲ್ಲ ವ್ಯಕ್ತಿತ್ವಗಳು ಅವರಲ್ಲಿ ಮೈಗೂಡಿಸಿಕೊಂಡಿವೆ, ದಾವಣಗರೆ ವಿಶ್ವವಿದ್ಯಾಲಯ ಇಂತಹ ವ್ಯಕ್ತಿಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ಆ ವಿಶ್ವವಿದ್ಯಾಲಯದ ಘನತೆ ಹೆಚ್ಚಿದೆ ಎಂದು ಹೇಳಿದರು.
ತೋಟದಪ್ಪ ಧರ್ಮಸಂಸ್ಥೆ ಕಾಯಕ ಯೋಗಿ ಬಸವಣ್ಣನವರ ಎಲ್ಲ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದೆ, ಬಸವಣ್ಣನವರ ಪ್ರತಿರೂಪ ಎಂದರೆ ತಪ್ಪಾಗಲಾರದು ಎಂದರು. ಡಾ.ಎಲ್ .ರೇವಣ್ಣ ಸಿದ್ಧಯ್ಯ ಅವರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನವಾಗಿ ನವೀಕರಿಸಿರುವ ವಾಚಾನಾಲಯ ಹಾಗೂ ಪ್ರವಾಸಿಗರ ಕೊಠಡಿಗಳಿಗೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಚಾಲನೆ ನೀಡಿದರು.ಸಮಾರಂಭದಲ್ಲಿ ಗೌರವ ಕಾರ್ಯದರ್ಶಿ ಎಂ.ಸದಾಶಿವಪ್ಪ,ಬಿ.ಎಸ್.ಪರಮಶಿವಯ್ಯ,ಮಂಜುನಾಥ ಬಿಜ್ಜಹಳ್ಳಿ,ಎಸ್.ಉದಯ ಶಂಕರ್,ಜಿ.ಪರಮಶಿವ.ಎಸ್.ಮೃತ್ಯುಂಜಯ,ಕೆ.ವಿ.ಬಸವನಗೌಡ ಮತ್ತಿತರರು ಭಾಗವಹಿಸಿದ್ದರು.
21-04-2026