Courtesy :
ಹುಬ್ಬಳ್ಳಿಯಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಸದ್ದು ಮಾಡಿದ್ದು, ವಿಜಯನಗರದ ಜಿಮ್ ಟ್ರೈನರ್ ಸಮೀರ್ ಮುಲ್ಲಾನ ಜಾತಕ ಒಂದೊಂದಾಗಿ ಹೊರಬರುತ್ತಿದೆ. ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ, ದೌರ್ಜನ್ಯ ಮತ್ತು ಬಲವಂತದ ಗರ್ಭಪಾತಗಳ ಆರೋಪಗಳು ಆತನ ಮೇಲೆ ಕೇಳಿಬಂದಿದೆ.ವಿಜಯನಗರದ ಜಿಮ್ ಟ್ರೈನರ್ ಸಮೀರ್ ಮುಲ್ಲಾ ತನ್ನ ಸಂಪರ್ಕ ವಲಯದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್ ನಡೆಸಿದ್ದು. ಅವನ ಮೊಬೈಲ್ ಫೋನ್‌ನಲ್ಲಿ ಹಲವು ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್‌ಗಳು, ಫೋಟೋಗಳು ಮತ್ತು ಕೆಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಖುಷಿ ಕಲಬುರಗಿ ಎಂಬ ಯುವತಿಯೊಂದಿಗೆ ಸಮೀರ್ ಮುಲ್ಲಾ ಹೊಂದಿದ್ದ ಸಂಬಂಧವು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖುಷಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಇದೆ. ಇದಲ್ಲದೆ, ಪ್ರತೀ ಬಾರಿ ದೌರ್ಜನ್ಯ ನಂತರ ಗರ್ಭಪಾತ ಮಾಡಲು ಬಲವಂತ ಮಾಡುತ್ತಿದ್ದನೆಂದು ಹೇಳಲಾಗಿದೆ. ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.ಮಾತ್ರೆಗಳನ್ನು ಸೇವಿಸಲು ಖುಷಿ ನಿರಾಕರಿಸಿದಾಗ, ಸಮೀರ್ ಮುಲ್ಲಾ ಒತ್ತಡ ಹೇರುತ್ತಿದ್ದನು ಮತ್ತು ಬೆದರಿಕೆ ಹಾಕುತ್ತಿದ್ದನು ಎಂಬುದು ಆರೋಪದ ಭಾಗವಾಗಿದೆ. ಮಾತ್ರೆ ತೆಗೆದುಕೊಳ್ಳುವ ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ತನಗೆ ಕಳುಹಿಸುವಂತೆ ಕೂಡ ಸೂಚಿಸುತ್ತಿದ್ದನೆಂದು ಹೇಳಲಾಗಿದೆ. ಈ ರೀತಿಯ ವಿಡಿಯೋಗಳು ಇದೀಗ ಬಹಿರಂಗಗೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ
04-04-2026