First slide

Courtesy :

ನಂಜನಗೂಡು ಹಗಿನವಾಳು ಗ್ರಾಮದಲ್ಲಿ ಬಸವೇಶ್ವರರ ಬಾವುಟ ವಿವಾದದಿಂದ ಜಾತ್ರೆ ಮಧ್ಯದಲ್ಲೇ ಸ್ಥಗಿತ, ರಥ ಅನಾಥವಾಗಿ ನಿಂತಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಜಾತ್ರೆ ಹಬ್ಬ ಬಂದರೇ ಇಡೀ ಗ್ರಾಮಕ್ಕೆ ಗ್ರಾಮವೇ ಒಂದಾಗಿ ಜಾತ್ರೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಜಾತ್ರೆಯಲ್ಲಿ ಒಂದೊಂದು ಸಣ್ಣ ತಪ್ಪುಗಳು ನಡೆದರೆ ಅದನ್ನು ಸರಿ ಮಾಡಿಕೊಂಡು ಹೋಗುವುದು ಹಿರಿತನ ಎನ್ನುತ್ತಾರೆ. ಆದರೆ ಈ ಊರಿನಲ್ಲಿ ಸಣ್ಣ ಗಲಾಟೆಯಿಂದ ಸಂಭ್ರಮದಿಂದ ನಡೆಯಬೇಕಿದ್ದ ಜಾತ್ರೆ ನಿಂತು ಹೋಗಿದೆ. ನಂಜನಗೂಡು ಹಗಿನವಾಳು ಗ್ರಾಮದಲ್ಲಿ ಬಸವೇಶ್ವರರ ಬಾವುಟ ವಿವಾದದಿಂದ ಜಾತ್ರೆ ಮಧ್ಯದಲ್ಲೇ ಸ್ಥಗಿತ, ರಥ ಅನಾಥವಾಗಿ ನಿಂತಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಥಕ್ಕೆ ಬಾವುಟ  ಕಟ್ಟಿದರೆ ಜಾತ್ರೆಗೆ ಕಳೆ, ಜಾತ್ರೆ ಶುರು. ಆದ್ರೆ ಇಲ್ಲಿ ರಥದ ಮುಂದೆ ಬಾವುಟ ಕಟ್ಟಿದ್ದಕ್ಕೆ ಜಾತ್ರೆಯೇ ಮುರಿದು ಬಿದ್ದಿದೆ! ಹೌದು, ಯಕಶ್ಚಿತ್ ಒಂದು ಬಾವುಟ ಗಲಾಟೆ ಊರ ಜಾತ್ರೆಯನ್ನು ನಡುದಾರಿಯಲ್ಲೇ ಮೊಟಕುಗೊಳಿಸಿದೆ!ಒಂದೇ ಒಂದು ಸಣ್ಣ ತಪ್ಪಿನಿಂದ ಇಡೀ ಜಾತ್ರೆ ಬುಡಮೇಲು

02-02-2026