Courtesy :
ಈ ಒಂದು ವಾರ ಬೆಂಗಳೂರು ಫುಲ್ ಕಲರ್‌ಫುಲ್ ಆಗಿರುತ್ತೆ. ಹೊಸ ಹೊಸ ಕಥೆಗಳು, ಹೊಸ ಗೆಳೆಯರು, ಕಾಫಿ ಹೀರುತ್ತಾ ಸಿನಿಮಾ ಹರಟೆ.. ಅಬ್ಬಬ್ಬಾ, ಆ ಮಜಾನೇ ಬೇರೆ. ನೀವಿನ್ನೂ ಪಾಸ್ ತಗೊಂಡಿಲ್ಲ ಅಂದ್ರೆ ತಡ ಮಾಡ್ಬೇಡಿ, ಲುಲು ಮಾಲ್ ಕಡೆ ವಿಸಿಟ್ ಹಾಕಿ, ಪ್ರಪಂಚದ ಬೆಸ್ಟ್ ಸಿನಿಮಾಗಳನ್ನ ಕಣ್ತುಂಬಿಕೊಳ್ಳಿ! ದೊಡ್ಡ ದೊಡ್ಡ ಪ್ರಶಸ್ತಿ ಗೆದ್ದಿರೋ ಇಂಟರ್‌ನ್ಯಾಷನಲ್ ಸಿನಿಮಾದಿಂದ ಹಿಡಿದು, ನಮ್ಮ ಕನ್ನಡದ ಇಂಡಿಪೆಂಡೆಂಟ್ ಸಿನಿಮಾಗಳವರೆಗೂ ಎಲ್ಲವೂ ಇಲ್ಲಿ ಸಿಗುತ್ತೆ. ಸೀರಿಯಸ್ ಆಗಿ ಸಿನಿಮಾ ನೋಡೋರಿಗಷ್ಟೇ ಅಲ್ಲ, ಸುಮ್ಮನೆ ಟೈಂಪಾಸ್ ಮಾಡೋರಿಗೂ ಇಲ್ಲಿ ಮಸ್ತ್ ಮನರಂಜನೆ ಇದೆ.
ಇದು ಸುಮ್ಮನೆ ಆಟ ಅಲ್ಲ, ಬರೋಬ್ಬರಿ 17ನೇ ಆವೃತ್ತಿಯ ಸಿನಿಮಾ ಹಬ್ಬ. ಜನವರಿ 29 ರಿಂದ ಫೆಬ್ರವರಿ 6, 2026 ರವರೆಗೆ ಇಡೀ ಬೆಂಗಳೂರು ಒಂದು ದೊಡ್ಡ ಸಿನಿಮಾ ಥಿಯೇಟರ್ ತರ ಆಗುತ್ತೆ. ಕರ್ನಾಟಕ ಸರ್ಕಾರ ಮತ್ತು ಚಲನಚಿತ್ರ ಅಕಾಡೆಮಿ ಸೇರಿಕೊಂಡು ನಡೆಸ್ತಿರೋ ಈ ಕಾರ್ಯಕ್ರಮ ಈಗ ಇಂಡಿಯಾದಲ್ಲೇ ಒನ್ ಆಫ್ ದ ಬೆಸ್ಟ್ ಫಿಲ್ಮ್ ಫೆಸ್ಟಿವಲ್ ಆಗಿ ಬೆಳೆದಿದೆ. ಬರೀ ಲೋಕಲ್ ಅಲ್ಲ, ಗ್ಲೋಬಲ್ ಲೆವೆಲ್ ಹಬ್ಬ ಇದು! ಈ ಸಲದ ಲಿಸ್ಟ್ ನೋಡಿದ್ರೆ ತಲೆ ತಿರುಗುತ್ತೆ! ಬರೋಬ್ಬರಿ 60 ರಿಂದ 70 ದೇಶಗಳಿಂದ ಬಂದಿರೋ 200ಕ್ಕೂ ಹೆಚ್ಚು ಸಿನಿಮಾಗಳನ್ನು ಇಲ್ಲಿ ತೋರಿಸ್ತಾರೆ. ದೊಡ್ಡ ದೊಡ್ಡ ಪ್ರಶಸ್ತಿ ಗೆದ್ದಿರೋ ಇಂಟರ್‌ನ್ಯಾಷನಲ್ ಸಿನಿಮಾದಿಂದ ಹಿಡಿದು, ನಮ್ಮ ಕನ್ನಡದ ಇಂಡಿಪೆಂಡೆಂಟ್ ಸಿನಿಮಾಗಳವರೆಗೂ ಎಲ್ಲವೂ ಇಲ್ಲಿ ಸಿಗುತ್ತೆ. ಸೀರಿಯಸ್ ಆಗಿ ಸಿನಿಮಾ ನೋಡೋರಿಗಷ್ಟೇ ಅಲ್ಲ, ಸುಮ್ಮನೆ ಟೈಂಪಾಸ್ ಮಾಡೋರಿಗೂ ಇಲ್ಲಿ ಮಸ್ತ್ ಮನರಂಜನೆ ಇದೆ.ಇಲ್ಲಿ ಬರೀ ಸಿನಿಮಾ ನೋಡಿ ಪಾಪ್ ಕಾರ್ನ್ ತಿನ್ನೋದಲ್ಲ, ಮಾಸ್ಟರ್‌ಕ್ಲಾಸ್ ಮತ್ತು ಪ್ಯಾನಲ್ ಡಿಸ್ಕಷನ್ ಕೂಡ ಇರುತ್ತೆ. ನಿರ್ದೇಶಕರು, ನಟರು ಮತ್ತು ವಿಮರ್ಶಕರು ನೇರವಾಗಿ ಸಿಗ್ತಾರೆ. ಸಿನಿಮಾ ವಿದ್ಯಾರ್ಥಿಗಳಿಗಂತೂ ಇದು ಓಪನ್ ಯೂನಿವರ್ಸಿಟಿ ಇದ್ದ ಹಾಗೆ.
ರಾಜಾಜಿನಗರದ ಲುಲು ಮಾಲ್‌ನಲ್ಲಿರೋ ಸಿನಿಪೊಲಿಸ್ (Cinepolis) ಈ ಸಲದ ಮೇನ್ ಅಡ್ಡ. ಅಲ್ಲಿ ಬರೋಬ್ಬರಿ 11 ಸ್ಕ್ರೀನ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ ಶೋ ಇರುತ್ತೆ. ಇದು ಬಿಟ್ರೆ ಚಾಮರಾಜಪೇಟೆಯ ಕಲಾವಿದರ ಸಂಘ, ಡಾ. ರಾಜ್‌ಕುಮಾರ್ ಭವನ ಮತ್ತು ಬನಶಂಕರಿಯಲ್ಲಿರೋ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲೂ ಪ್ರದರ್ಶನ ಇರುತ್ತೆ. ಒಟ್ಟು 400ಕ್ಕೂ ಹೆಚ್ಚು ಪ್ರದರ್ಶನಗಳಿರೋದ್ರಿಂದ ನಿಮಗೆ ಬೇಕಾದ ಸಿನಿಮಾ ಮಿಸ್ ಆಗೋ ಚಾನ್ಸೇ ಇಲ್ಲ.
ಕಾನ್, ಬರ್ಲಿನ್, ವೆನಿಸ್ ಫೆಸ್ಟಿವಲ್‌ಗಳಲ್ಲಿ ಸದ್ದು ಮಾಡಿದ ಮತ್ತು ಆಸ್ಕರ್ ರೇಸ್‌ನಲ್ಲಿರೋ ಎಷ್ಟೋ ಸಿನಿಮಾಗಳು ನಮ್ಮ ಇಂಡಿಯಾದಲ್ಲಿ ಥಿಯೇಟರ್‌ಗೆ ಬರೋದಿಲ್ಲ. ಆದ್ರೆ ಅಂತಾ ಅಪರೂಪದ ಸಿನಿಮಾಗಳನ್ನ ನೋಡೋಕೆ ಇದೇ ಬೆಸ್ಟ್ ಜಾಗ. ಡಾಕ್ಯುಮೆಂಟರಿಯಿಂದ ಹಿಡಿದು ಕಮರ್ಷಿಯಲ್ ಸಿನಿಮಾವರೆಗೂ ಎಲ್ಲಾ ಜಾನರ್ ಇಲ್ಲಿದೆ.
22-01-2026