ಮಂಗಳೂರಿಗೆ 2000 ರೂಪಾಯಿ, ಬೆಳಗಾವಿಗೆ 3000 ರೂಪಾಯಿ! ರಜೆಗಾಗಿ ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳಿಂದ ಶಾಕ್!
ಖಾಸಗಿ ಬಸ್ಗಳ ಟಿಕೆಟ್ ದರ ದುಬಾರಿ! ಬೆಂಗಳೂರಿನಲ್ಲಿ ಕೆಲಸ ಮಾಡುವ ಸಾಮಾನ್ಯ ಕುಟುಂಬದವರಿಗೆ ಖಾಸಗಿ ಬಸ್ಗಳ ಈ ನಡೆ ಭಾರೀ ತೊಂದರೆ ಮಾಡಿದೆ. ಗಣರಾಜ್ಯೋತ್ಸವ ರಜೆ ಮತ್ತು ವೀಕೆಂಡ್ ಒಟ್ಟಿಗೆ ಬಂದಿರುವುದರಿಂದ ತಮ್ಮ ತಮ್ಮ ಊರಿಗೆ ಹೋಗಬೇಕು ಅಂದುಕೊಂಡವರಿಗೆ ಸಮಸ್ಯೆ ಎದುರಾಗಿದೆ. ಸಾಮಾನ್ಯ ದಿನಗಳಲ್ಲಿ ಸ್ಲೀಪರ್ ಬಸ್ ದರ ₹500 ರಿಂದ ₹800, ₹1000 ಇರುವ ರೇಟ್ ಇದೀಗ 2000 ಗಡಿ ದಾಟಿದೆ. ಇದರಿಂದ ರಜೆ ಇದ್ರೂ ತಮ್ಮ ಊರಿಗೆ ಹೋಗಲು ದುಬಾರಿ ವೆಚ್ಚ ಮಾಡಬೇಕಾಗಿದ್ದು, ಹಿಂದೇಟು ಹಾಕ್ತಿದ್ದಾರೆ.ಸಾಲು ಸಾಲು ರಜೆ ಬಂದ್ರೆ ಸಾಕು ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು ಮಾಡ್ತಾರೆ. ಈ ಬಾರಿ ವೀಕೆಂಡ್ ಜೊತೆಗೆ ಸೋಮವಾರ ಗಣರಾಜ್ಯೋತ್ಸವ ಬಂದಿದ್ದು, ಟಿಕೆಟ್ ದರವನ್ನು ಡಬಲ್ ಮಾಡಿದ್ದಾರೆ ಖಾಸಗಿ ಬಸ್ ಮಾಲೀಕರು ಈ ಸಂದರ್ಭವನ್ನು ಬಂಡವಾಳ ಮಾಡಿಕೊಂಡು ಟಿಕೆಟ್ ದರಗಳನ್ನು ಡಬಲ್ ಮಾಡಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸುಲಭವಾಗಿ ಸಿಗುತ್ತಿದ್ದ ಪ್ರಯಾಣ ಈಗ ದುಬಾರಿಯಾಗಿದೆ. ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸಾಲು ಸಾಲು ರಜೆ (Holiday) ಬಂದ್ರೆ ಸಾಕು ಖಾಸಗಿ ಬಸ್ಗಳ ಟೆಕೆಟ್ ದರವನ್ನು ಕೇಳೊ ಹಂಗೇ ಇರುವುದಿಲ್ಲ. ಏಕಾಏಕಿ ಒಮ್ಮೆಗೆ ಟಿಕೆಟ್ ದರವನ್ನು ಡಬಲ್ (Double) ಮಾಡಿ ಬಿಡುತ್ತಾರೆ. ಈ ವಾರಾಂತ್ಯ ಮತ್ತು ಸೋಮವಾರ ಗಣರಾಜ್ಯೋತ್ಸವ ರಜೆಯಿಂದ ಸಾಲು ಸಾಲು ರಜೆಗಳು ಬಂದಿವೆ. ಜನರು ಊರುಗಳಿಗೆ ಹೋಗಲು, ಸಂಬಂಧಿಕರನ್ನು ಭೇಟಿಯಾಗಲು ಅಥವಾ ಸಣ್ಣ ಪ್ರವಾಸಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.
22-01-2026