First slide

Courtesy :

ಕ್ರೇಜಿಸ್ಟಾರ್ ರವಿಚಂದ್ರನ್ ಮೇಲೆ ಅತ್ಯಾಚಾರ ಆರೋಪ: 34 ವರ್ಷಗಳ ನಂತರವೂ ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ

1992ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ‘ಹಳ್ಳಿಮೇಷ್ಟ್ರು’. ಈ ಚಿತ್ರದಲ್ಲಿ ನಾಯಕಿ ಪರಿಮಳಾ ಆಗಿ ನಟಿಸಿದವರು ಬಿಂದಿಯಾ (ಫರ್ಹೀನ್ ಖಾನ್). ‘ಹಳ್ಳಿಮೇಷ್ಟ್ರು’ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ - ಬಿಂದಿಯಾ ಕಾಂಬಿನೇಶನ್ ವರ್ಕ್ ಆಗಿತ್ತು. ತಮಿಳಿನ ‘ಮುಂದಾನೈ ಮುಡಿಚು’ ಚಿತ್ರದ ರೀಮೇಕ್ ಆಗಿದ್ದ ‘ಹಳ್ಳಿಮೇಷ್ಟ್ರು’ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಕಲೆಕ್ಷನ್ ಸಹ ಮಾಡಿತ್ತು. ಹೀಗಿರುವಾಗಲೇ, ರವಿಚಂದ್ರನ್ ವಿರುದ್ಧ ನಟಿ ಬಿಂದಿಯಾ ಗಂಭೀರ ಆರೋಪ ಮಾಡಿದ್ದರು. 34 ವರ್ಷಗಳ ಹಿಂದಿನ ವಿವಾದ ಈಗಲೂ ನಟಿ ಬಿಂದಿಯಾ ಅವರನ್ನ ಕಾಡುತ್ತಿದೆ. ಅಂದು 'ರವಿಚಂದ್ರನ್ ವಿರುದ್ಧ ಬಿಂದಿಯಾ ಅತ್ಯಾಚಾರ ಯತ್ನದ ಆರೋಪ ಮಾಡಿದ್ದಾರೆ' ಎಂದು ಮ್ಯಾಗಝೀನ್‌ವೊಂದು ಪ್ರಕಟಿಸಿತ್ತು. ರವಿಚಂದ್ರನ್ ಕೇಸ್‌ ಹಾಕಿದ್ಮೇಲೆ ‘ಅದೆಲ್ಲಾ ಸುಳ್ಳು’ ಅಂತ್ಹೇಳಿ ಬಿಂದಿಯಾ ಕ್ಷಮೆ ಕೇಳಿದ್ದರು. ಈಗಲೂ ವಿವಾದವನ್ನ ನೆನೆದು ಕಣ್ಣೀರಿಟ್ಟು ಬಿಂದಿಯಾ ಕ್ಷಮೆಯಾಚಿಸಿದ್ದಾರೆ.

ಮ್ಯಾಗಝೀನ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ‘’ರವಿಚಂದ್ರನ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು’’ ಎಂದು ಬಿಂದಿಯಾ ಆರೋಪ ಮಾಡಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಎಂದೂ ವಿವಾದಗಳಿಗೆ ಸಿಲುಕಿದವರಲ್ಲ. ಕೋರ್ಟು, ಕಚೇರಿ ಅಂತ ಅಲೆದವರೂ ಅಲ್ಲ. ಸಿನಿಮಾ ಬಗ್ಗೆ ಸದಾ ಕನಸು ಕಾಣುತ್ತಿದ್ದ ಕನಸುಗಾರ ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ತಮ್ಮ ಮೇಲೆ ಮಾಡಿರುವ ಆರೋಪವನ್ನ ಸಾಬೀತು ಪಡಿಸುವಂತೆ ಸವಾಲು ಹಾಕಿ ಬಿಂದಿಯಾ ವಿರುದ್ಧ ರವಿಚಂದ್ರನ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅದೂ ಕೇವಲ 1 ರೂಪಾಯಿಗೆ.

ಕೇಸ್‌ ವಿಚಾರಣೆ ವೇಳೆ, ‘’ನಾನು ಆ ತರಹದ ಹೇಳಿಕೆ ನೀಡಿಲ್ಲ. ಅದೆಲ್ಲಾ ಸುಳ್ಳು’’ ಎಂದು ತಪ್ಪೊಪ್ಪಿಕೊಂಡ ನಟಿ ಬಿಂದಿಯಾ ಕ್ಷಮೆ ಕೇಳಿದ್ದರು. ರವಿಚಂದ್ರನ್ ವಿರುದ್ಧ ಸುಳ್ಳು ಆರೋಪ ಮಾಡಿ ಬಿಂದಿಯಾ ಅಂದೂ ಕ್ಷಮೆ ಕೇಳಿದ್ದರು. ಇಂದೂ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ. ಕನ್ನಡ ನಟ, ನಿರ್ದೇಶಕ ರಘುರಾಮ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬರುವ ‘ನೂರೊಂದು ನೆನಪು’ ಸಂದರ್ಶನದಲ್ಲಿ ನಟಿ ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

28-05-2026