First slide

Courtesy :

ಜಗತ್ತಿಗೆ ಪ್ರಧಾನಿ ಮೋದಿ ಮತ್ತೊಂದು ವಾರ್ನಿಂಗ್‌, ಮತ್ತೆ ಬಡತನ ಬರುತ್ತೆ ಎಂದ ಪಿಎಂ

ಇಡೀ ಜಗತ್ತಿಗೆ ಪ್ರಧಾನಿ ಮೋದಿ ಮತ್ತೊಂದು ಬಿಗ್‌ ಎಚ್ಚರಿಕೆ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಚಿನ್ನ, ಇಂಧನದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು, ಅದರ ಬೆನ್ನಲ್ಲೇ ಚಿನ್ನ, ಪೆಟ್ರೋಲ್‌, ಡಿಸೇಲ್‌ ಬೆಲೆ ದಿಢೀರ್‌ ಏರಿಕೆಯಾಯ್ತು, ಈಗ ಇಡೀ ವಿಶ್ವಕ್ಕೆ ಪ್ರಧಾನಿ ಮೋದಿ ಬಿಗ್‌ ಎಚ್ಚರಿಕೆಯನ್ನು ಕೊಟ್ಟಿದ್ದು ಕೊರೊನಾ ಬಳಿಕ ಜಗತ್ತಿಗೆ ಮತ್ತೊಂದು ಆಘಾತ ಕಾದಿದೆಯಾ ಎಂಬ ಆತಂಕ ಶುರುವಾಗಿದೆ, ನೆದರ್ಲೆಂಡ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರು ಇವತ್ತು ವಿದೇಶಿ ಮಣ್ಣಿನಲ್ಲಿ ನಿಂತು ಭಾರತೀಯ ಸಮುದಾಯವನ್ನ ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಸಮುದಾಯಕ್ಕೆ ಅತಿದೊಡ್ಡ ಎಚ್ಚರಿಕೆಯ ಗಂಟೆ ಮೊಳಗಿಸಿದ್ದಾರೆ. ಒಂದು ವೇಳೆ ಪರಿಸ್ಥಿತಿ ಈಗಲೇ ಸುಧಾರಿಸದಿದ್ದರೆ, ದಶಕಗಳಿಂದ ನಾವು ಬಡತನ ನಿರ್ಮೂಲನೆಗೆ ಮಾಡಿದ ಎಲ್ಲಾ ಶ್ರಮವೂ ಮಣ್ಣು ಪಾಲಾಗುತ್ತೆ ಅಂತ ಮೋದಿ ಕಳವಳವ್ಯಕ್ತಡಿಸಿದ್ದಾರೆ. ಅಷ್ಟಕ್ಕೂ ಮೋದಿ ಬಿಚ್ಚಿಟ್ಟ ಸತ್ಯವೇನು?, ಕೊರೊನಾ ಬಳಿಕ ಜಗತ್ತಿಗೆ ಮತ್ತೊಂದು ಆಘಾತ ಕಾದಿದೆಯಾ?, ಇಂಧನ ಬಿಕ್ಕಟ್ಟು ತಡೆಯದಿದ್ದರೆ ಬಡತನದ ಸ್ಫೋಟ ಆಗುತ್ತಾ?

18-05-2026