First slide

Courtesy :

ಮಹಿಳಾ ಮೀಸಲಾತಿ ಮಸೂದೆ 2026 ಮರುಮಂಡನೆ ಒತ್ತಾಯಿಸಿಸಿ ಆರ್ ಪಿ ಐ ಅಠವಳ ಪಕ್ಷದ ಆಗ್ರಹ

ಇತ್ತೀಚಿಗಷ್ಟೇ ಲೋಕಸಭೆಯಲ್ಲಿ ತಿರಸ್ಕೃತಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೊಮ್ಮೆ ಮರುಮಂಡನೆ ಮಾಡಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳ) ರಾಜ್ಯ ಘಟಕ ಒತ್ತಾಯಿಸಿದೆ. ಫ್ರೀಡಂ ಪಾರ್ಕ್ ನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ಕಾರ್ಯಕರ್ತರು ಮಹಿಳಾ ಪ್ರಾತಿನಿಧ್ದ ವಿರೋಧಿ ನಡೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಮಕ್ಕಳೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 






ಮಹಿಳಾ ಮೀಸಲಾತಿ ಅಂಗೀಕಾರವಾಗಲು ಕಾಂಗ್ರೆಸ್ ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಮುಂದೆ ನಿಲ್ಲಬೇಕಾಗಿತ್ತು. ಆದರೆ ಆ ಪಕ್ಷವು ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿ ನಿಜ ಬಣ್ಣವನ್ನು ಪ್ರದರ್ಶಿಸಿದೆ. ದೇಶದ ವಿರೋಧ ಪಕ್ಷಗಳು ಕೂಡ ಮಹಿಳೆಯರ ಮೀಸಲಾತಿ ವಿರೋಧಿ ನಡೆಯನ್ನು ತೋರಿಸಿವೆ ಎಂದು ಪ್ರತಿಭಟನೆಯಲ್ಲಿ ವಿರೋಧಪಕ್ಷಗಳ ನಿಲುವನ್ನು ಪ್ರತಿಭಟನೆಯಲ್ಲಿ ಉಗ್ರವಾಗಿ ಖಂಡಿಸಲಾಯಿತು. 



ಮಹಿಳಾ ಮೀಸಲಾತಿ  ಮಸೂದೆಯನ್ನು ಸರ್ಕಾರವು ಮತ್ತೊಮ್ಮೆ ಸದನದಲ್ಲಿ ಮಂಡಿಸಬೇಕು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆತ್ಮಾವಲೋಕನ ಮಾಡಿಕೊಂಡು ಮಸೂದೆ ಪರ ಮತ ಚಲಾಯಿಸಬೇಕು. ಈ ಸಂಬಂಧ ಎನ್ ಡಿ ಎ ಮೈತ್ರಿ ಪಕ್ಷವಾದ ಆರ್ ಪಿಐ  ಅಠವಳೇ ಪಕ್ಷವು ಮಸೂದೆ ಪರ ಇಡೀ ದೇಶಾದ್ಯಂತ ವಿಶೇಷ ಜಾಗೃತಿ ಅಭಿಯಾನವನ್ನು ಆಯೋಜಿಸುತ್ತಿದೆ ಎಂದು ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.

08-05-2026