First slide

Courtesy :

BCM ಗರ್ಲ್ಸ್ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಎಣ್ಣೆ ಪಾರ್ಟಿ

ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಅಪ್ರಾಪ್ತರಿಗೆ ಪಬ್ ಮತ್ತು ಬಾರ್ ಗಳಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ತವರು ಜಿಲ್ಲೆಯಲ್ಲಿ ಅಪ್ರಾಪ್ತರಿರುವ ಹಾಸ್ಟೆಲ್​​​​​ನಲ್ಲೇ ಎಣ್ಣೆ ಪಾರ್ಟಿ ನಡೆದಿದೆ. ಕಲಬುರಗಿಯಲ್ಲಿರುವ ರಾಜ್ಯ ಸರ್ಕಾರದ ಬಿಸಿಎಂ ಮಹಿಳಾ ಹಾಸ್ಟೆಲ್ ನಲ್ಲಿ ಹುಡುಗ ಹಾಗೂ ಹುಡುಗಿಯರು ಬಿಂದಾಸ್ ಆಗಿ ಮದ್ಯ ಸೇವೆನೆ ಪಾರ್ಟಿ ಮಾಡಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಹೌದು… ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಿಸಿಎಂ ಹಾಸ್ಟೆಲ್ ನದ್ದು ಎನ್ನಲಾಗುತ್ತಿರೋ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇನ್ನು ವಿದ್ಯಾರ್ಥಿನಿ ಬಿಯರ್ ಕುಡಿಯುತ್ತಿರೋ ದೃಶ್ಯ ವಿಡಿಯೋದಲ್ಲಿದ್ದು, ಇದನ್ನೇ ವಾರ್ಡನ್ ಬಂಡವಾಳ ಮಾಡಿಕೊಂಡಿಕೊಂಡಿದ್ದು, ಪ್ರಕರಣ ಮುಚ್ಚಿಹಾಕಲು ಹಣ ವಸೂಲಿಗೆ ಇಳಿದಿದ್ದಾರೆ. ಅಲ್ಲದೇ ಮೂರ್ನಾಲ್ಕು ವಾರ್ಡನ್​​ಗಳು, ವಿದ್ಯಾರ್ಥಿನಿಯರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ. ಇನ್ನು ವಾರ್ಡನ್ ಹಾಗೂ ವಿದ್ಯಾರ್ಥಿನಿಯ ಆಡಿಯೋ ಕೂಡಾ ವೈರಲ್ ಆಗಿದೆ. ಮಹಿಳಾ ಹಾಸ್ಟೆಲ್​​​​​ನಲ್ಲೇ ನಡೆದ ಈ ಮಧ್ಯದ ಪಾರ್ಟಿಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಅಪ್ರಾಪ್ತರಿಗೆ ಪಬ್ ಮತ್ತು ಬಾರ್ ಗಳಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅವರ ತವರು ಜಿಲ್ಲೆಯಲ್ಲಿ ಅಪ್ರಾಪ್ತರಿರುವ ಹಾಸ್ಟೆಲ್​​​​​ನಲ್ಲೇ ಎಣ್ಣೆ ಪಾರ್ಟಿ ನಡೆದಿದೆ.

11-06-2026